ಕೆಲವೊಂದ್ ಸಲ life ಅಲ್ಲಿ ಗೊತ್ತಿಲ್ದೆ ಬಹಳ ಅನುಭವಗಳು ಆಗಿರ್ತವೆ but ನಾವ್ಗಳು ನಮ್ busy life ಅಲ್ಲಿ ಅದ್ನೇಲ್ಲ ಅಷ್ಟೇ ಬೇಗ ಮರ್ತ್ ಹೋಗಿರ್ತಿವಿ ಆದ್ರೆ ಆ ಅನುಭವ ಬೇರೆ ಬೇರೆ ಸನ್ನಿವೇಶದಲ್ಲಿ ನಮ್ಮೊಟ್ಟಿಗೆ ಇರುತ್ತೆ ಇವತ್ತಿನ ಈ ಬರವಣಿಗೆಲಿ ಆ ಅನುಭವಗಳಿಗೆ ಬೇರೆ ತರಹದ ಆಯಾಮ ಕೊಡೊ ಪ್ರಯತ್ನ…
ನಾವೆಲ್ಲಾ ಸ್ಕೂಲ್ ಹೋಗೋ time ಅಲ್ಲಿ ನಂಗ್ ನೆನಪ್ ಇರೋ ಹಾಗೆ ಸ್ಕೂಲ್ shoes ಅನ್ನೋದು middle class ಲೈಫ್ ಅಲ್ಲಿ ತುಂಬಾ ದೊಡ್ಡದು. ಗವರ್ನಮೆಂಟ್ ಸ್ಕೂಲ್ ಅಂದ್ರೆ ಕೇಳ್ಬೇಕಾ shoes ಎಲ್ಲಾ compulsoryನೇ ಅಲ್ಲಾ. ಬರೊ ಕೆಲವಬ್ರಿಗೇ ಹಾಕೋಳಕ್ ಚಪ್ಪಲಿ ಸಹ ಇರ್ತಿರ್ಲಿಲ್ಲ ಅಂತಾದ್ರಲ್ shoes ಎಲ್ಲಿಂದ ಬರ್ಬೇಕು.
ಎಲ್ಲಾ ತಂದೆ ತಾಯಿಗೂ ಅವರ್ ಮಕ್ಕಳ್ ಎಲ್ಲರಿಗಿಂತ ಚೆನ್ನಾಗ್ ಇರ್ಬೇಕು ಅನ್ನೋ ಆಸೆ ಇರುತ್ತೆ ಹಂಗೆ ನಮ್ ಅಪ್ಪನು ಕೂಡ ಆಸೆ ಪಟ್ಟು ನಂಗು ಒಂದ್ ಜೊತೆ white shoes ಕೊಡ್ಸಿದ್ರು.
ವಾರದ ಕೊನೆಗ್ ಬರೊ ಶನಿವಾರಕ್ಕೆ ವಾರ ಪೂರ್ತಿ ಕಾಯ್ಕೊಂಡ್ ಕೂರ್ತಿದ್ದೆ ಯಾಕೆ ಅಂದ್ರೆ ಅವತ್ತಿನ ದಿನ ಮತ್ತೆ ಆ white canvas shoes ಹಾಕೊಂಡ್ ವೈಟ್ and white ಯುನಿಫಾರ್ಮ್ (White ಶರ್ಟ್ , White ಚಡ್ಡಿ) ಹಾಕೊಂಡ್ Nirma Powder advertisement ಕೊಡೊ ತರ ಎರಡು ಚಡ್ಡಿ ಜೇಬಲ್ಲಿ ಕೈ ಹಾಕೊಂಡ್ ಸ್ವಲ್ಪ ಮೇಲ್ ಎಳ್ಕೊಂಡ್ ಹೊರಟ್ರೆ ಆಹಾ ಆ ಖುಷಿಗೆ ಕೊನೆನೇ ಇಲ್ಲ.
ಈ ಅನುಭವ ನಮ್ಗ್ ಗೊತ್ತಿಲ್ದೆ ಬಂದಿರೋದು ಆದ್ರೆ ಅದೇ ಅನುಭವ ಈಗ ಬೇರೆ ರೀತಿನಲ್ಲಿ ನಮ್ಮೊಟ್ಟಿಗಿದೆ.
ಹೇಗೆ ಅಂದ್ರೆ ಇವತ್ತಿಗೂ ಸಹ ನಾವ್ ಅದೇ ತರಹದ ಬೇರೆ ಖುಷಿಗೆ weekend ಅನ್ನೋ ಹೆಸರಲ್ಲಿ ಅದೇ ಶನಿವಾರಕ್ಕೆ ಕಾಯ್ತಾ ಕುರ್ತೀವಿ ಅಲ್ವಾ…
ಆ white ಸ್ಕೂಲ್ ಯುನಿಫಾರ್ಮ್ ಏನಾದ್ರು ಗಲೀಜ್ ಆದ್ರೆ PT ಮಾಸ್ಟರ್ ಕೊಡೊ ವದೆಗಿಂತ 10X ಜೋರಾಗ್ ಬೀಳೋ ಅಮ್ಮನ್ ಸೌಟ್ ವದೆ ತಡ್ಕೊಳೋದ್ ತುಂಬಾ ಕಷ್ಟ. ಯಾಕೆಂದ್ರೆ, ಶನಿವಾರ ಅಂದ್ರೆ half day ಸ್ಕೂಲ್, ಕರ್ಮಕ್ಕೆ ಡ್ರಿಲ್ (exercise) ಅದೇ ದಿನ ಇರ್ತಿತ್ತು ಅದೇ white and white ಅಲ್ಲಿ ಮಣ್ಣ್ ಲ್ ಕುಡ್ಕೊಂಡ್ ಆ PT ಮಾಸ್ಟರ್ ಏಳೋದನ್ನ ಉರಿ ಬಿಸ್ಲಲ್ ಕೂತ್ಕೊಂಡ್ ಕೇಳ್ಬೇಕಿತ್ತು. ಕೆಳಗ್ ಕೂತ್ರೆ ಚಡ್ಡಿ ಮಣ್ಣಾಗುತ್ತೆ ನಿಂತ್ರೆ ಮಾಸ್ಟರ್ ವದೆ ಎಂತ ಕಷ್ಟದ್ time ಗೊತ್ತ ಅದು. ಹಳೆ ನೋಟ್ಬುಕ್ ಅಲ್ಲಿ ಬರ್ದ್ ಆಗಿರೋ ಮದ್ಯದ್ paper ಹರ್ಕೊಂಡ್ ಜೇಬಲ್ ಇಟ್ಕೊಂಡ್ ಬರ್ತಿದ್ದೆ ಹಸ್ಕೊಂಡ್ ಕುರಕ್ಕೆ. ಕುರೋ time ಬಂದಾಗ ಬಡ್ಡಿ ಮಕ್ಕ್ಳು ಫ್ರೆಂಡ್ಸ್ ಅನ್ನೋ ಹಿತ ಶತ್ರುಗಳು ಇರ್ತಾರಲ್ಲ ಹಾಸೋದೇ ತಡ ಎಳ್ಕೊಂಡ್ 1 paper ಅಲ್ಲಿ 4 ಪೀಸ್ ಮಾಕ್ದೊಂದ್ ಎಲ್ಲಾ ಕುಂಡಿ ಕೆಳಗ್ ಹಾಕೊಂಡ್ ಕುರ್ತಿದ್ರು ಉಳ್ದಿರೋ ಒಂದ್ ತುಕುಡಿ ಪೇಪರ್ ಅಲ್ಲಿ ಅಡ್ಜಸ್ಟ್ ಮಾಡ್ಕೊಂಡ್ ಕೂತ್ಕೊಂಡಿದ್ದ್ ನೆನಪ್ ಈಗ್ಲೂ ಇದೆ.
ಈ ಅನುಭವನಾ ಈಗ್ಲೂ ಪಾನಿ ಪುರಿ ತಿನ್ನೋವಾಗ್ಲೊ ಅತ್ವ ದೋಸೆ ತಿನ್ನೋವಾಗ್ಲೊ ನೆನಪ್ ಮಾಡ್ಕೊಂಡ್ ಒಬ್ನೇ ಒಳಗೊಳಗೇ ನಗ್ತಾ ಇರ್ತೀನಿ. ಒಂದ್ ದೋಸೆಗೆ 4 ಕೈ ಬಿದ್ದಾಗ ಎಲ್ಲಿ ದೊಡ್ piece ದೋಸೆ ಇನ್ನೊಬನ್ ಕೈಸೇರುತ್ತೆ ಅಂತ ಸಿಕ್ಕಷ್ಟೆಲ್ಲ ಎಳ್ಕೊಂಡ್ ತಿನ್ನೋ time ಅಲ್ಲಿ ಮತ್ತೆ ಆ ಅನುಭವಕ್ಕೊಂದು ಮೆಲಕ್ ಹಾಕ್ತಿನಿ…
ಆಟ ಜಾಸ್ತಿ ಪಾಠ ಕಮ್ಮಿ ಇರೋ ದಿನನೇ ಶನಿವಾರ ಅವತ್ತಿನ್ ಆಟದ time ಅಲ್ಲಿ ಗೊತ್ತಿದ್ದೋ ಗೊತ್ತಿಲ್ದೇನೂ white and white ಅಲ್ಲಿ ಏನಾದ್ರು ಒಂದ್ ಕಲೆ ಆಗ್ಲೇ ಬೇಕಲ್ವಾ, ಇಲ್ಲ ಅಂದ್ರೆ ನಾನ್ ಸ್ಕೂಲ್ ಹೋಗಿದ್ದೆ ಅನ್ನೋದೇ doubt ಆಗ್ತಿತ್ತು. ಯಾರ್ದೋ ಕೈ ಗುರ್ತು, ಓಡೋವಾಗ ಬಿದ್ದು ಚಡ್ಡಿ ಮಣ್ಣ್ ಆಗಿರೋ ಗುರ್ತು, ಬೇಕಂತಾನೇ ಈ ನನ್ ಮಗ ಫುಲ್ white ಅಲ್ ಇದಾನೆ ಹೆಂಗಾದ್ರೂ ಮಾಡಿ ಅವನ್ ಶರ್ಟ್ ಗಲೀಜ್ ಮಾಡಬೇಕು ಅಂತಾನೆ ಹೊಂಚ್ ಹಾಕೊಂಡ್ ಗಲೀಜ್ ಮಾಡಿರೋ ಗುರ್ತು, ಒಂದಾ ಎರಡಾ ಏನಾದ್ರು ಒಂದ್ ಆಗಿರೋದು. ಏನು ಆಗಿಲ್ಲ ಅಂದ್ರು ಕೊನೆಗ್ ಸ್ಕೂಲಿಗ್ ಬರ್ತಿದ್ದಿದ್ ಬಿಸಿ ಊಟ ಬಡ್ಸೋ time ಅಲ್ಲಿ ಏನಾದ್ರು ಒಂದ್ ಬಟ್ಟೆ ಮೇಲ್ ಬೀಳೋದು ಆದ್ರೆ ಖುಷಿ ಏನ್ ಗೊತ್ತ ಊಟದ್ ಡಬ್ಬ ಇಳ್ಸೋವಾಗ ಒಂದೆರ್ಡ್ ಡಬ್ಬ ಜಾಸ್ತಿ ಬಾಯ್ಸ್ school ಹತ್ರಾನೇ ಇಳ್ಸ್ಕೊಂಡ್ girls ಸ್ಕೂಲ್ ಗೆ ಕಮ್ಮಿ ಡಬ್ಬ ಕಳಸ್ತಾ ಇದ್ದಿದ್ದು.
ಊಟ ಕಮ್ಮಿ ಬೀಳ್ಬೇಕು ಆ ಕಡೆ ಇರೋ ಹುಡ್ಗಿರ್ ಈ ಕಡೆ ಬರ್ಲೆ ಬೇಕು ನಮ್ ಹುಡಗೂರಿಗೆ ಅದೇ ಹಬ್ಬ. girls ಸ್ಕೂಲ್ ಡಬ್ಬ ಕಾಲಿ ಆಗೋದೇ ತಡ ಕಾಯ್ಕೊಂಡ್ ನಿಂತಿದ್ ಎಲ್ಲಾ ಹುಡಗೂರು ಒಟ್ಟಿಗೆ ಲೈನ್ ಅಲ್ಲಿ ನಿಲ್ಲೋರು ಆ ಶಿಸ್ತು ಸಂಯಮ ಆಹಾ ಮೇಸ್ಟ್ರು ಕಣ್ಣಲ್ ನೀರ್ ಬರೋದ್ ಒಂದೇ ಬಾಕಿ ನಿಜವಾಗ್ಲೂ ಇವ್ರು ನಮ್ ಸ್ಕೂಲ್ ಹುಡುಗುರ ಅಂತ ಪಾಪ ಆ ಮೇಷ್ಟ್ರಿಗೇನ್ ಗೊತ್ತು ಅವರ್ ಕಣ್ಣಿರಿಗ್ ಕಾರಣ ಪಕ್ಕದಲ್ಲಿರೋ ಗರ್ಲ್ಸ್ ಸ್ಕೂಲ್ ಹುಡ್ಗಿರು ಅಂತ…
ಊಟ ಬಡ್ಸೋ ಜಗಳದಲ್ಲಿ ಬಟ್ಟೆ ಮೇಲ್ ಏನಾದ್ರು ಒಂದ್ ಬೀಳೋದು ಕೊನೆಗೆ ಜಗಳ ಆಡಿರೋನ್ ತಟ್ಟೆಗೆ ಎಲ್ಲರು ಕೈ ಹಾಕಿ ತಟ್ಟೆ ತೊಳಿಯೋ time ಬರೋಕು ಮುಂಚೆ ನಂಗ್ ಸಾಕು ಅಂತ ಎದ್ ಓಡ್ ಹೋಗೋ ಖುಷಿ ಇನ್ನು ಬೇಕು ಅನ್ಸುತ್ತೆ ಅದೇ ಅನುಭವ ಈಗ್ಲೂ ಬೇಡ ಅಂದ್ರು ಸಿಗುತ್ತೆ, ಹೆಂಗೆ ಗೊತ್ತ roommates ಎಲ್ಲಾ ಸೇರಿ ಅಡ್ಗೆ ಮಾಡ್ಕೊಂಡ್ ತಿಂದು ಪಾತ್ರೆ ತೊಳಿಯೋ time ಅಲ್ಲಿ ಒಬ್ಬ urgent ಕೆಲಸ ಇದೆ ಕಣೋ ಬಂದೆ ಇರು ಅನ್ನೋದಾದ್ರೆ, ಮಗ ಮೊನ್ನೆ ಅನ್ನ ಮಾಡಿದ್ ಪಾತ್ರೆ ನಾನೆ ತೊಳದ್ ಇಟ್ಟಿದ್ದ್ದು ಇವತ್ ನನ್ ತೊಳಿಯಲ್ಲ ಅನ್ನೋನ್ ಒಬ್ಬ, ಸಾಂಬಾರ್ ನನ್ ಮಾಡಿದ್ದೂ ನೀನೇ ಏನು ಮಾಡಿಲ್ಲ ಬರಿ ತರಕಾರಿ cut ಮಾಡಿದೀಯ ಇವತ್ ನಿನ್ ತೊಳಿ ಅನ್ನೋನ್ ಒಬ್ಬ.
ಕೊನೆಗೆ ಸಂಜೆ ತಂಕ ಹಂಗೆ ಇಟ್ಟು ಯಾರಿಗ್ ಹೊಟ್ಟೆ ಹಸಿಯುತ್ತೆ ಅವ್ನೆ ಹೋಗಿ ಪಾತ್ರೆ ತೊಳಿಯೋದು ವಾಡಿಕೆ. ಇದು ಶತಮಾನಗಳಿಂದ ಬಂದಂತ ವಾಡಿಕೆ ದಯಮಾಡಿ ಇದನ್ನ ಹಿಂಗೇ ಮುಂದ್ ವರ್ಸ್ಕೊಂಡ್ ಹೋಗ್ಬೇಕು ಅನ್ನೋದು ನನ್ನ ಬೇಡಿಕೆ. ಹೀಗೆ ಒಬ್ಬೊಬ್ರು ಒಂದೊಂದ್ ನಾಟಕ ಆಡೋವಾಗಾ ಅಲ್ಲಿ ಮತ್ತೆ ಈ ಅನುಭಕ್ಕೊಂದ್ ಹೊಸ ಅನುವಾದ ಸಿಗುತ್ತೆ…
ಸಾಂಬಾರ್ ಬಿದ್ದಿರೋ ಚಡ್ಡಿ, ಅನ್ನದ್ ಕೈ ಗುರ್ತು, ಮಣ್ಣಾಗಿರೋ shoes ಇವೆಲ್ಲ ಮನೆಲ್ ಗೊತ್ತಾದ್ರೆ ಅಮ್ಮನ್ ಕೈಯಿಂದ ಸಿಗೋ ಬಹುಮಾನ ಒಂದಾ ಎರಡಾ
shirtಗೊಂದು ಸೌಟು, ಚಡ್ಡಿಗೊಂಡು ಪೊರಕೆ, shoesಗೊಂದು ಕಪಾಳ ಮೋಕ್ಷ ತಪ್ಪಿದಲ್ಲಾ..
This is the most complicated situation ever I seen and undergone" ಎಷ್ಟೇ ಆದರು ಮಿಡ್ಲ್ ಕ್ಲಾಸ್ ಜೀವನ ಅಲ್ವಾ adjustment ಅನ್ನೋದು ಹುಟ್ಟಿನಿಂದನೆ ಬಂದಿರೋದು ತುಂಡು ಹಾಳೆಲಿ ಚಡ್ಡಿ ಉಳಸ್ಕೊಂಡೋರ್ ನಾವ್ ಈಗ ಅಮ್ಮನ್ ಕೈಯಲ್ ವದೆ ತಪ್ಪಸ್ಕೊ ಬೇಕು ಅಂದ್ರೆ ಬಟ್ಟೆ ಮತ್ತೆ ಶೂಸ್ ಕ್ಲೀನ್ ಆಗ್ಬೇಕು but time ಇಲ್ಲ ಆದ್ರೆ ನಾವ್ ಗೊತ್ತಲ್ಲ ಎಲ್ರು ಕ್ಲಾಸ್ ರೂಮ್ ಇಂದ ಹೊರಗ್ ಹೋದ್ಮೇಲೆ ಮೆಲ್ಲಗೆ ಡೋರ್ ಓಪನ್ ಮಾಡಿ ಒಳಗ್ ಹೊಕ್ಕು ಕೆಳಗ್ ಬಿದ್ದಿರೋ ಸಣ್ಣ ಸಣ್ಣ ಚಾಕ್ಪಿಸ್ ಆಯ್ಕೊಂಡ್ board ತುಂಬಾ ಗೀಚೋದು duster ತಗೊಂಡು ಅದ್ನೆಲ್ಲ ಅಳ್ಸಿದ್ರೆ artificial whitener ರೆಡಿ ಎಲ್ಲೆಲ್ಲಿ ಮಣ್ಣಾಗಿದಿಯೋ ಅಲ್ಲೆಲ್ಲ duster ಅಲ್ಲಿ ಇರೋ ಪುಡಿನ ಬಟ್ಟೆ ಮೇಲ್ ಆಗಿರೋ ಗುರ್ತಿನ್ ಮೇಲ್ ಮೆತ್ಕೊಂಡ್ shoes ಬಿಚ್ಚಿ ಉಳ್ದಿರೋ ಚಾಕ್ಪಿಸ್ನ ಅದರ್ ಮೇಲೆ polish ಮಾಡೋ ತರ ಚೆನ್ನಾಗ್ ತಿಕ್ಕೊಂಡು ಮತ್ತೆ back to Nirma ಅನ್ನೋ ತರ white and white ಹಾಕೊಂಡ್ ಅದೇ ಚಡ್ಡಿ ಜೇಬಲ್ಲಿ ಕೈ ಹಾಕೊಂಡ್ ಮತ್ತೆ ಮನೆ ಕಡೆ ರಾಜ ನಡೆ.
ಇದು ನನ್ನ ಬಾಲ್ಯದ ಒಂದು ಸಣ್ಣ ನೋಟ..
ಇನ್ನು ಕೇಳ್ಬೇಕು ಅನ್ಸುದ್ರೆ comment ಮಾಡಿ share ಮಾಡಿ...
.png)
12 comments:
Waiting for ಭಾಗ ೨
Superb Manju....ಮಸ್ತ ಬರದಿ, ದೂಸ್ತ....
Waiting for ಭಾಗ ೨
Superb Manju....ಮಸ್ತ ಬರದಿ, ದೂಸ್ತ....
ತುಂಬಾ ಚೆನ್ನಾಗಿದೆ
ತುಂಬಾ ಚೆನ್ನಾಗಿದೆ
ಚೆನ್ನಾಗಿ ಬರೆದಿದಿಯಾ ಗೆಳೆಯ,
ಈ ನಿನ್ನ ಲೇಖನವನ್ನು ಓದುವಾಗ ಬಾಲ್ಯದ ಹತ್ತಾರು ನೆನಪುಗಳು ಕಣ್ಮುಂದೆ ಬಂದವು.
Thank you for taking me to those precious moments of Childhood 😊
Super brother nanu ennu enella madidiv.handsup and good job bro
Nicely written, Manjunath! Lots of school memories concerning school uniforms, schools, bags etc. Thanks for sharing your school memories!
Very nice bro
Mast nenap maadsidi noda dost. Evella maadi Ega dodda corporate jeevana maadatevi, aa thara Khushi padaku punnya maadirbeka.
ಮಸ್ತ ಬರದಿ ಅಣ್ಣಾ
Post a Comment