ತೊರೆದು ನಡೆವೆ ನಾ ಎಲ್ಲಾ ಆಸೆಯಾ,
ಅರಿತು ಬಾಳ್ವೆ ಪ್ರತಿ ಜೀವ ರಾಶಿಯಾ,
ಸಾವು ಎಂಬ ಘನ ಘೋರ ಸತ್ಯವಾ,
ತಿಳಿದು ನೋಡು ಒಮ್ಮೆ ಇದರ ಅರ್ಥವಾ,
ಅದುವೇ ಬದುಕು ಮನುಜ,
ಅರಿತರೆ ಬದುಕು ಬಹಳ ಸಹಜ..
ಬಿತ್ತಿಲ್ಲ ಬೆಳೆದಿಲ್ಲ ಬಂಧು ಬಾಂಧವರೆನ್ನ,
ಹೊತ್ತಿಲ್ಲ ಹೊರಲಿಲ್ಲ ನನ್ನ ಪಾಪಗಳನ್ನ,
ಹುಟ್ಟಿಗೂ ಹೊತ್ತೊತ್ತಿಗೂ ನೆನಪಾಗುವವನು,
ಹೊರಟು ಹೋಗುವ ಮೊದಲು ಬದುಕ ತಿಳಿ ಹೇಳಿದವನು,
ಸಾವಿನ ಸಾರ್ಥಕತೆಯ ಅನುಭವಿಸಿದವನು...
ಮನೆಯ ದೇವರ ಗುಡಿಯ ಮುಖ್ಯ ಆರಾಧ್ಯ,
ತನ್ನುಸಿರನೇ ಮಾಡಿ ಹೋದ ನೈವೇಧ್ಯ,
ತಾ ಮುಂದು ನಾ ಮುಂದು ಎಂದೆನ್ನದವನು,
ಉಸಿರು ಹೋಗುವ ಮೊದಲೇ ಅದ ಅರಿತವನು,
ಅಗಲಿಕೆಯ ನೋವೆನಗೆ ನೀಡಿ ಹೋದವನು...
ಕೈಯ ಹಿಡಿದು ನಡೆಸಿದಾದಿನದಿಂದ,
ಕೈ ನೀಡಿ ಕೊಡುವುದನು ಮರೆಯಬೇಡೆಂದ,
ಆ ದೈವವು ತಿಳಿಯಿತು ಈ ಎಲ್ಲ ಸತ್ಯಾ,
ಕೊನೆಗುಳಿದುದೆ ನಮಗೆ ನಿನ್ನ ನೆನಪು ನಿತ್ಯಾ,
ನಾ ಕಂಡ ಕನಸೆಲ್ಲಾ ಅಂದಿಂದಲೇ ಮಿತ್ಯಾ...
- ಪಿ. ಎನ್. ಶ್ರೀ
.png)

2 comments:
In the end it's all about the sweet memories that remains in our heart. Excellent work bro!
No comments.🤐🤐
Post a Comment